ಅಜ್ಮೇರ್ ಶರೀಫ್ ದರ್ಗಾ, ಅಜ್ಮೇರ್ ದರ್ಗಾ, ಅಜ್ಮೇರ್ ಷರೀಫ್ ಅಥವಾ ದರ್ಗಾ ಷರೀಫ್ ಪೂಜ್ಯ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿಯ ಸೂಫಿ ದೇಗುಲವಾಗಿದೆ (ದರ್ಗಾ). ಇದು ಭಾರತದ ರಾಜಸ್ಥಾನದ ಅಜ್ಮೇರ್‌‌ನಲ್ಲಿದೆ. ಈ ಪವಿತ್ರಕ್ಷೇತ್ರದಲ್ಲಿ ಚಿಶ್ತಿಯ ಗೋರಿ (ಮಕ್ಬರಾ) ಇದೆ. ಮಾರ್ಚ್ 1236 ರಲ್ಲಿ ಈ ಬೋಧಕನ ಮರಣದ ನಂತರದ ಶತಮಾನದಲ್ಲಿ ಮುಯಿನ್ ಅಲ್- ದಿನ್‍ನ ಸಮಾಧಿ (ದರ್ಗಾ) ಬಹಳವಾಗಿ ಪೂಜಿಸಲ್ಪಡುವ ಸ್ಥಳವಾಯಿತು. ಎಲ್ಲ ಸಾಮಾಜಿಕ ವರ್ಗಗಳ ಸದಸ್ಯರಿಂದ ಗೌರವಿಸಲ್ಪಟ್ಟ ಈ ಸಮಾಧಿಯನ್ನು ಈ ಯುಗದ ಪ್ರಮುಖ ಸುನ್ನಿ ಆಡಳಿತಗಾರರು ಬಹಳ ಗೌರವದಿಂದ ಕಂಡರು. ದೆಹಲಿಯ ಸುಲ್ತಾನ್ - ಸುಲ್ತಾನ್ ಅಲ್ತಮಷ್ 1332 ರಲ್ಲಿ ಸಂತನ ಸ್ಮರಣಾರ್ಥ ನೆನಪಿಸಿಕೊಳ್ಳೌ ಸಮಾಧಿಗೆ ಪ್ರಸಿದ್ಧ ಭೇಟಿ ನೀಡಿದನು. ಇದೇ ರೀತಿಯಲ್ಲಿ, ನಂತರದ ಮೊಘಲ್ ಸಾಮ್ರಾಟ ಅಕ್ಬರ್ (ಮರಣ: 1605) ತನ್ನ ಆಳ್ವಿಕೆಯಲ್ಲಿ ಹದಿನಾಲ್ಕು ಬಾರಿ ಈ ಪುಣ್ಯಕ್ಷೇತ್ರಕ್ಕೆ ಭೇಟಿನೀಡಿದನು. ಅವನು 1579 ರಲ್ಲಿ ಗೋರಿ (ದರ್ಗಾ) ಯ ಮುಖ್ಯಕೋಣೆಯನ್ನು ಪುನರ್ನಿರ್ಮಿಸಿದನು. ಜಹಾಂಗೀರ್, ಷಹಜಹಾನ್ ಮತ್ತು ಜಹಾನಾರಾ ನಂತರ ರಚನೆಯನ್ನು ನವೀಕರಿಸಿದರು. == ಛಾಯಾಂಕಣ == == ಉಲ್ಲೇಖಗಳು == === ಗ್ರಂಥಸೂಚಿ === == ಹೆಚ್ಚಿನ ಓದಿಗೆ == , . . (1989). ' - . . 978-0-19-563144-9. == ಹೊರಗಿನ ಕೊಂಡಿಗಳು == " , , ". .. , . 2019-09-08. 2020-12-03. " , , ". ( ).